“ಅಹಿಂಸಾಕ್ಷೇತ್ರ+ದಾನಕ್ಷೇತ್ರ=ಧರ್ಮಕ್ಷೇತ್ರ”

 

ನಮ್ಮ ಪಾಪಗಳೇ ನಮ್ಮ ರೋಗಗಳು.

ಚಿಕ್ಕ ಚಿಕ್ಕ ಪಾಪಗಳು ಮಾಡಿದರೆ ಚಿಕ್ಕ ಚಿಕ್ಕ ರೋಗಗಳು, ದೊಡ್ಡ ದೊಡ್ಡ ಪಾಪಗಳು ಮಾಡಿದರೆ ದೊಡ್ಡ ದೊಡ್ಡ ರೋಗಗಳು, ಬಗೆ ಬಗೆಯ ಪಾಪಗಳು ಮಾಡಿದರೆ ಬಗೆ ಬಗೆಯ ರೋಗಗಳು. ಪಾಪಗಳೇ ಮಾಡದಿದ್ದರೆ ರೋಗಗಳೇ ಇಲ್ಲ.

ಪಾಪವೇ ರೋಗ. ಪುಣ್ಯವೇ ಭೋಗ.

ಎಷ್ಟು ಪುಣ್ಯ ಮಾಡುತ್ತೇವೊ ಅಷ್ಟು ಭೋಗ. ಚಿಕ್ಕ ಚಿಕ್ಕ ಪುಣ್ಯಗಳು ಮಾಡಿದರೆ ಚಿಕ್ಕ ಚಿಕ್ಕ ಭೋಗಗಳು. ದೊಡ್ಡ ದೊಡ್ಡ ಪುಣ್ಯಗಳು ಮಾಡಿದರೆ ದೊಡ್ಡ ದೊಡ್ಡ ಭೋಗಗಳು. ಬಗೆಬಗೆಯ ಪುಣ್ಯಗಳು ಮಾಡಿದರೆ ಬಗೆ ಬಗೆಯ ಭೋಗಗಳು. ಮಿತ್ರರೇ ಪುಣ್ಯಗಳೇ ಮಾಡದೆ ಇದ್ದರೆ ಭೋಗಗಳೇ ಇಲ್ಲ.

ಧರ್ಮವೆಂದರೆ ಏನು ? ಧರ್ಮಕ್ಷೇತ್ರವೆಂದರೆ ಏನು ? ದಾನಕ್ಷೇತ್ರವೇ ಧರ್ಮ ಕ್ಷೇತ್ರ. ದಾನವೇ ಧರ್ಮ.

ನಮ್ಮ ಹತ್ತಿರ ಏನಿದೆಯೋ ಅದು ನಮ್ಮ ಆಪ್ತರಿಗೆ ಸೇರದೆ ಇದ್ದರೆ ನಾವು ಅಧರ್ಮರು. ಧರ್ಮಕ್ಷೇತ್ರವೆಂದರೆ ದಾನಕ್ಷೇತ್ರವೆಂದು ತಿಳಿದುಕೊಳ್ಳಬೇಕು. ದಾನವೇ-ಧರ್ಮ. ಧರ್ಮಕ್ಷೇತ್ರವೆಂದರೆ ದಾನಕ್ಷೇತ್ರ ಮಿತ್ರರೇ. ಯಾರು ತಮ್ಮ ಹತ್ತಿರ ಇರುವುದನ್ನು ಪಕ್ಕದವನಿಗೆ ದಾನ ಮಾಡುತ್ತಾರೋ, ಬಹಿರಂಗದಾನ ಮಾಡುತ್ತಾರೊ ಅವರು ಧರ್ಮಕ್ಷೇತ್ರದಲ್ಲಿ ವಿಶೇಷವಾಗಿ ಇದ್ದಹಾಗೆ. ಧರ್ಮಕ್ಷೇತ್ರದ ನಿರ್ವಚನೆ ದಾನಕ್ಷೇತ್ರ. ಮೈಡಿಯರ್ ಫ್ರೆಂಡ್ಸ್ … ಯಾರ ಹತ್ತಿರ ಏನಿದೆಯೋ ಅದೆಲ್ಲಾ ಪಕ್ಕದವನಿದೆ.

ಈಶಾವಾಸ್ಯಮಿದಂ ಸರ್ವಂ… ಯತ್ ಕಿಂಚ ಜಗತ್ಯಾಂ ಜಗತ್

ನಮ್ಮ ಹತ್ತಿರ ಇರುವುದು ನಮ್ಮದು ಮಾತ್ರವೇ ಅಲ್ಲ. ನಮ್ಮದಲ್ಲದೇ ಇರುವುದನ್ನು ನಾವು ಗುಪ್ತವಾಗಿರಿಸಿಕೊಳ್ಳುವುದು … ಅದು ಅಧರ್ಮ. ನಮ್ಮದಲ್ಲದೇ ಇರುವುದು … ನಮ್ಮ ಹತ್ತಿರ ತಾತ್ಕಾಲಿಕವಾಗಿ … ಲೋಕ ಕಲ್ಯಾಣಾರ್ಥಕ್ಕೆ ಮಾತ್ರವೇ ಇರುವುದನ್ನು … ಎಲ್ಲರಿಗೂ ಹೊಂದಿದ್ದು…ಎಲ್ಲರಿಗೂ ಹಂಚುವುದೇ ಧರ್ಮ.

ದಾನವೇ ಧರ್ಮ. ದಾನಕ್ಷೇತ್ರವೇ ಧರ್ಮಕ್ಷೇತ್ರ . ಅನ್ಯಥಾ ಮತ್ತೊಂದು ಬೇರೆ ಸತ್ಯವಿಲ್ಲ. ಬೇರೆ ಅರಿವಿಲ್ಲ. ದಾನಕ್ಷೇತ್ರ ಎಂದರೆ ಅರ್ಥ … ಟು ಗಿವ್ ಅಂಡ್ ಗಿವ್ ಅಂಡ್ ಗಿವ್ … ವಾಟ್ ಎವರ್ ವಿ ಹಾವ್ …

ಅಧರ್ಮದಲ್ಲಿ ಯಾವತ್ತಿಗೂ ಇರಬಾರದು. ಧರ್ಮದಲ್ಲೇ ಸದಾ ವಿರಾಜಿಸಬೇಕು. ನಮ್ಮ ಹತ್ತಿರ ಏನಿದೆಯೋ ಅದು ಎಲ್ಲರಿಗೂ ಹಂಚಬೇಕು.

ಯಾವ ಕೋಳಿ ಸಹ ಕತ್ತರಿಸಲ್ಪಡಬಾರದು, ಯಾವ ಮೇಕೆ ಸಹ ಕತ್ತರಿಸಲ್ಪಡಬಾರದು. ಮಿತ್ರರೇ, ಯಾವ ಮೀನು ಸಹ ಹಿಡಿಯಲ್ಪಡಬಾರದು. ಮೀನುಗಳು ಸಮುದ್ರದಿಂದ ಹಿಡಿಯಲ್ಪಟ್ಟರೆ … ಬೇಟೆಯಾಡಿದರೆ … ಸಮುದ್ರಗಳು ಉಕ್ಕುತ್ತವೆ, ಭೂಮಿಯನ್ನು ಸರ್ವನಾಶ ಮಾಡುತ್ತವೆ. ಆಮೇಲೆ ನಿಮ್ಮಿಷ್ಟ. ಸಮುದ್ರ ಉಕ್ಕಿದರೆ ಏನಾಗುತ್ತದೊ ತಿಳಿದುಕೊಂಡಿದ್ದೇವೆ. ಮೀನುಗಳನ್ನು ಹಿಡಿಯುವುದನ್ನು ಬಿಡೋಣ, ಮಾಂಸ ತಿನ್ನುವುದನ್ನು ಬಿಡೋಣ, ಪ್ರಾಣಿ ವಧೆ ಬಿಡೋಣ.

ಹಿಂಸಾ ಪರಮೋ ಅಧರ್ಮಃ
ಅಹಿಂಸಾ ಪರಮೋ ಧರ್ಮಃ

” ಹಿಂಸಾ ಛೋಡೊ – ಹಂಸಾ ಪಕಡೊ ” ಹಿಂಸೆಯನ್ನು ಬಿಟ್ಟು ಹಂಸವನ್ನು ಹಿಡಿದುಕೊಳ್ಳೋಣ. ಹಂಸ ಅಂದರೆ ಶ್ವಾಸ.

ನಮ್ಮ ಜೀವನವನ್ನು ಕುರಿತು, ಜೀವನ ಸಾಗಿಸುವ ವಿಧಾನವನ್ನು ಕುರಿತು ನಿರಂತರ ಜಾಗ್ರತೆಯಿಂದ ಯೋಚಿಸಬೇಕು. ಈ ಜನ್ಮ ನಮಗೆ ತಿಳಿಯದೆ ಅಕಸ್ಮಾತ್ತಾಗಿ ನಡೆದ ಘಟನೆಯಲ್ಲ. ಈ ಜನ್ಮ ತೆಗೆದುಕೊಳ್ಳುವುದು ಎಂಬುವುದು ಒಂದು ಯೋಜನೆಯಿಂದ ನಡೆದ ವಿಷಯ. ನಾವು ಆರಿಸಿಕೊಂಡು ತೆಗೆದುಕೊಂಡ ಜನ್ಮ.

ಈ ಜನ್ಮವನ್ನು ವಿಜಯಯುತವಾಗಿ ಸಾಗಿಸಬೇಕು. ಸ್ವ-ಇಚ್ಛೆಯಿಂದ ತೆಗೆದುಕೊಂಡ ಜೀವನವನ್ನು ಮೂರ್ಖತನದಿಂದ ದುರ್ಭರ ಮಾಡಿಕೊಳ್ಳಬಾರದು. ಜೀವನವನ್ನು ಒಂದು ಮೂರು ದಿನಗಳ ಅದ್ಭುತವಾದ ಜೀವನವನ್ನಾಗಿ ರೂಪಿಸಿಕೊಳ್ಳಬೇಕು.