” ಅವರವರ ‘ಜೀವನದಎಲೆ’ ಅವರವರದೇ “
ಪಕ್ಕದವರ ಜೀವನ ಪಕ್ಕದವರದು.. ನಮ್ಮ ಜೀವನ ನಮ್ಮದು
ನಮ್ಮ ಕೆಲಸಗಳನ್ನು ನಾವು ಮಾಡಿಕೊಂಡು ಹೋಗುತ್ತಲೇ ಇರಬೇಕು..
ಇತರರನ್ನು ಕುರಿತು ಹೆಚ್ಚು ಹಚ್ಚಿಕೊಳ್ಳಬಾರದು.
ಒಂದು ಕರ್ಮದ ಅನಂತರ ಮತ್ತೊಂದು ಕರ್ಮ… ಹಾಗೆ, ಕರ್ಮಗಳನ್ನು ನಿರಂತರವಾಗಿ ಮಾಡುತ್ತಲೇ ಇರಬೇಕು.
ಕರ್ಮ ಎಂಬುವುದು ಅನುಭವವನ್ನು ನೀಡುತ್ತದೆ
ಒಂದು ಅನುಭವದ ನಂತರ, ಮತ್ತೊಂದು ಅನುಭವ… ಹಾಗೆ, ಅನುಭವಗಳನ್ನು ಹೊಂದುತ್ತಲೇ ಇರಬೇಕು
“ಅನುಭವಗಳನ್ನು ಸೃಷ್ಟಿಸಿಕೊಳ್ಳುವುದು”… “ಅನುಭವಗಳನ್ನು ಅನುಭವಿಸುವುದು” ಎಂಬುವುದು ಒಂದು ದೊಡ್ಡ ಕಲೆ…
ಅದು ಒಂದು ದೊಡ್ಡ ಶಾಸ್ತ್ರ ..
ಎಲ್ಲಾ ಅನುಭವಗಳನ್ನೂ ನಾವು ಆನಂದವಾಗಿ ಆಸ್ವಾದಿಸಬೇಕು
“ಅನುಭವಗಳನ್ನು ಆನಂದಿಸುವುದು” ಎಂಬುವುದು ನಮ್ಮ ಜೀವಶಕ್ತಿಯನ್ನು ಹೆಚ್ಚಿಸುತ್ತದೆ
ಆನಂದವಿಲ್ಲದೆ ಮಾಡುವ ಎಲ್ಲಾ ಕೆಲಸಗಳು…
ಇತರರ ಮೆಚ್ಚುಗೆಗಾಗಿ ನಮಗೆ ಇಷ್ಟವಿಲ್ಲದಿದ್ದರೂ ಮಾಡುವ ಕೆಲಸಗಳೆಲ್ಲವೂ…
ನಮ್ಮ ಜೀವಶಕ್ತಿಯನ್ನು ಆಗಿಂದಾಗ, ವಿಶೇಷವಾಗಿ ನಾಶನ ಮಾಡಿಬಿಡುತ್ತದೆ
ನಮ್ಮ ಜೀವಶಕ್ತಿಯನ್ನು ಆಗಿಂದಾಗ ನಾವು ಹೆಚ್ಚಿಸಿಕೊಳ್ಳುತ್ತಿರಬೇಕು
ಯಾರನ್ನೂ ಕುರಿತು ಯಾವ ತರಹದ ತೀರ್ಪನ್ನೂ ಸಹ ಯಾವತ್ತಿಗೂ ನೀಡಬಾರದು
ಯಾವ ವಿಷಯದಲ್ಲಾದರೂ ಸರಿ, ಇತರರನ್ನು ಕುರಿತು ತೀರ್ಪು ಹೇಳುವ ಅಧಿಕಾರ ನಮಗೆ ಸ್ವಲ್ಪವೂ ಇಲ್ಲ
ಹಾಗೆಯೇ, ನಮ್ಮ ಬಗ್ಗೆ ಸಹ ತೀರ್ಪನ್ನು ಹೇಳುವ ಅಧಿಕಾರ ಸಹ ಇತರರಿಗೆ ಯಾರಿಗೂ ಇಲ್ಲ
ನಮ್ಮ ಕುರಿತು ’ವಿವರಣೆಗಳನ್ನು’ ಯಾರಿಗೂ ಯಾವತ್ತಿಗೂ ಸಹ ಕೊಡಬಾರದು
ನಮ್ಮ ಸ್ವಂತ ವಿಷಯಗಳನ್ನು ಕುರಿತು ಯಾರಿಗೂ, ಯಾವುದೇ ರೀತಿಯ ’ವಿವರಣೆಗಳ’ನ್ನು ಕೊಡಬೇಕಾದ ಅವಶ್ಯಕತೆ ಇಲ್ಲ
ಇತರರ ಬಗ್ಗೆ ತೀರ್ಪು ಹೇಳುವುದು… ಇತರರಿಗೆ ವಿವರಣೆಗಳನ್ನು ನೀಡುವುದು ಎಂಬುವುದು
ನಮ್ಮಲ್ಲಿರುವ ಜೀವಶಕ್ತಿಯನ್ನು ವಿಶೇಷವಾಗಿ ನಾಶಗೊಳಿಸುತ್ತದೆ
ನಮ್ಮ ಜೀವಶಕ್ತಿಯನ್ನು ಆಗಿಂದಾಗ ನಾವೇ ಸಂರಕ್ಷಿಸಿಕೊಳ್ಳುತ್ತಿರಬೇಕು
ನಮ್ಮ ಜೀವಶಕ್ತಿಯನ್ನು ಆಗಿಂದಾಗ ಬೆಳೆಸಿಕೊಳ್ಳುವುದೆಂಬುವುದು ನಮ್ಮ ಧ್ಯಾನ ಅಭ್ಯಾಸದ ಕೈಯಲ್ಲಿದೆ
ನಮ್ಮ ಜೀವನ ನಮಗೆ ನಾವೆ ಬಡಿಸಿಕೊಳ್ಳುವ ಊಟದ ಎಲೆ ಇದ್ದ ಹಾಗೆ
ನಾವು ಉಣ್ಣಬೇಕೆಂದಿರುವ ಅಡುಗೆಗಳನ್ನು ನಾವೇ ಬಡಿಸಿಕೊಳ್ಳಬೇಕು
ನಾವು ಮಾಡಿದ ಅಡುಗೆಯನ್ನು ನಮಗೆ ನಾವೇ ಬಡಿಸಿಕೊಳ್ಳುತ್ತೇವೆ
ಅವರವರ “ಜೀವನದ ಎಲೆ” ಅವರವರದೇ
Recent Comments