” ಅಪಸವ್ಯದಿಂದ ಸವ್ಯದ ಕಡೆಗೆ “
“ಸತ್ಯ” ಎನ್ನುವುದು ದೇಶಕಾಲ ಪರಿಸ್ಥಿತಿಗಳಿಗೆ ಅತೀತವಾದದ್ದು
ಜೀವನದಲ್ಲಿ ಪ್ರಪ್ರಥಮವಾಗಿ ಸಂಶೋಧಿಸಬೇಕಾಗಿರುವುದೇ ಸತ್ಯ
ಜೀವನದಲ್ಲಿ ಪ್ರಪ್ರಥಮವಾಗಿ ತಿಳಿದುಕೊಳ್ಳಬೇಕಾಗಿರುವುದೇ ಸತ್ಯ
ಜೀವನದಲ್ಲಿ ಪ್ರಪ್ರಥಮವಾಗಿ ವಿವರವಾಗಿ ಗ್ರಹಿಸಬೇಕಾಗಿರುವುದೇ ಸತ್ಯ
“ಅಹಂ ಆತ್ಮ” ಎನ್ನುವುದೇ “ಸತ್ಯ”
“ಮಮಾತ್ಮಾ ಸರ್ವಭೂತಾತ್ಮಾ” ಎನ್ನುವುದೇ “ಪರಮ ಸತ್ಯ”
“ಧರ್ಮ” ಅಂದರೆ ಅದು ತಪ್ಪದೇ ಆಚರಿಸಬೇಕಾಗಿರುವುದು
ಧರ್ಮ ಅಂದರೆ ಅದು ತಪ್ಪದೇ ಅನುಸರಿಸಬೇಕಾಗಿರುವುದು
ಧರ್ಮ ಎನ್ನುವುದು ಸದಾ ಸತ್ಯದ ಮೇಲೆ ಆಧಾರಪಟ್ಟಿರುತ್ತದೆ
ಸತ್ಯ ತಿಳಿದುಕೊಂಡ ನಂತರವೇ ಧರ್ಮ ಅರ್ಥವಾಗುತ್ತದೆ
ಒಂದು ಕಡೆ ಸತ್ಯದ ಬಗ್ಗೆ .. ಮತ್ತೊಂದು ಕಡೆ ದೇಶ ಕಾಲ ಪರಿಸ್ಥಿತಿಗಳ ಬಗ್ಗೆ ಹಿರಿಮೆಯನ್ನು ತೋರಿಸುತ್ತಾ
“ಮಧ್ಯ ಮಾರ್ಗ” ದಲ್ಲಿ ಇರುವುದೇ “ಧರ್ಮ”
“ಸವ್ಯ” ಅಂದರೆ “ಸರಿಯಾದದ್ದು”
“ಅಪಸವ್ಯ” ಅಂದರೆ “ಸರಿಯಲ್ಲದ್ದು”
“ಸತ್ಯ-ಧರ್ಮಗಳು” ತಿಳಿಯದಿದ್ದರೆ ಜೀವನ “ಅಪಸವ್ಯ” ವಾಗಿ ಇರುತ್ತಾ
ಕೆಳಗೆ-ಮೇಲೆ ಆಗುತ್ತಾ ನದಿಯಲ್ಲಿನ ಸುಳಿಯಂತಾಗಿರುತ್ತದೆ
ಸತ್ಯ-ಧರ್ಮಗಳನ್ನು ವಿವರವಾಗಿ ತಿಳಿಯುವುದರ ಮೂಲಕ
ಜೀವನ ಪ್ರಶಾಂತ ಸರೋವರದಂತೆ “ಸವ್ಯ” ಆದಾಗ ..
ಯಾವುದು ತಿನ್ನಬೇಕೋ ಅದೇ ತಿನ್ನುತ್ತೇವೆ .. ಯಾವುದು ತಿನ್ನಬಾರದೊ ಅದನ್ನು ಬಿಡುತ್ತೇವೆ
ಏನು ಮಾತನಾಡಬೇಕೊ ಅದನ್ನೇ ಮಾತನಾಡುತ್ತೇವೆ .. ಏನು ಮಾತನಾಡಬಾರದೊ ಅದನ್ನು ಮಾತನಾಡುವುದಿಲ್ಲ
ಹೇಗೆ ಜೀವಿಸಬೇಕೊ ಹಾಗೆ ಜೀವಿಸುತ್ತೇವೆ .. ಹೇಗೆ ಜೀವಿಸಬಾರದೊ ಹಾಗೆ ಇನ್ನು ಜೀವಿಸುವುದಿಲ್ಲ
ಸತ್ಯ, ಜಾಗೃತಿ, ಧರ್ಮ, ಅರಿವು ಇವುಗಳ ಮೂಲಕ
ಸರಿಯಲ್ಲದ ಆಲೋಚನೆಗಳೆಲ್ಲಾ ಸರಿಯಾದ ಆಲೋಚನೆಗಳಾಗಿ ಬದಲಾವಣೆ ಹೊಂದುತ್ತದೆ
ಸರಿಯಲ್ಲದ ಮಾತುಗಳೆಲ್ಲಾ ಸರಿಯಾದ ಮಾತುಗಳಾಗಿ ಬದಲಾವಣೆ ಹೊಂದುತ್ತದೆ
ಸರಿಯಲ್ಲದ ಆಹಾರ ವಿಧಾನಗಳೆಲ್ಲಾ ಸರಿಯಾದ ಆಹಾರ ವಿಧಾನಗಳಾಗಿ ಬದಲಾವಣೆ ಹೊಂದುತ್ತದೆ
ಎಲ್ಲಾ ಸೇರಿ ನಮ್ಮಲ್ಲಿರುವ ಅಪಸವ್ಯಗಳೆಲ್ಲಾ ಕ್ರಮೇಣ ಸವ್ಯಗಳಾಗಿ ಬದಲಾಗುತ್ತದೆ
“ಎಲ್ಲಾ ಸವ್ಯ” ವಾಗಿ ಬದಲಾದ ಜೀವನವೇ “ದಿವ್ಯ”
ಸತ್ಯ, ಧರ್ಮ ತಿಳಿದುಕೊಂಡು ಧರ್ಮಾಚರಣೆಯ ಮೂಲಕ ಜೀವನವೆಲ್ಲಾ ಸವ್ಯವಾದಾಗ ..
ಆ ಜೀವನ “ದಿವ್ಯ ಜೀವನ”
ಆ ಜೀವನು “ದಿವ್ಯನು”
ಜೀವನ ದಿವ್ಯವಾದಾಗ ಪರಂಪರೆಯಾಗಿ ಜೀವನ “ಭವ್ಯ” ವಾಗುತ್ತದೆ
ಅಂದರೆ,
ಹಾಗೆ ಆದಾಗಲೇ ಸಕಲ ಸುಖಶಾಂತಿಗಳು, ಆರೋಗ್ಯ, ಐಶ್ವರ್ಯಗಳು ಹೇರಳವಾಗಿ ಸಿಗುತ್ತವೆ
ಆಗ ಎಲ್ಲಿ ನೋಡಿದರೂ ಮಿತ್ರರೇ ಇರುತ್ತಾರೆ
ಪ್ರತಿಯೊಂದು ಪ್ರಾಣಿಯೂ ಸಹ ನಮ್ಮ ಮಿತ್ರ ವೃಂದದಲ್ಲಿ ಸಂತೋಷವಾಗಿ ಬಂದು ಸೇರುತ್ತದೆ
ಎಲ್ಲಾ ಕಡೆಯಿಂದ ಧಾರಾಕಾರವಾಗಿ ಮಿತ್ರಲಾಭಗಳು ಸದಾ ಸುರಿಯುತ್ತಲೇ ಇರುತ್ತವೆ
ಅದು “ಭವ್ಯ ಜೀವನ” ಅಂದರೆ
“ಸವ್ಯ” “ದಿವ್ಯ” ಅಲ್ಲದೆ ಜೀವನ ..
“ಭವ್ಯ” ಎಂದಿಗೂ ಆಗಲಾರದು
’ಸತ್ಯ” “ಧರ್ಮ’ ತಿಳಿಯದ ಜೀವನ ..
“ಸವ್ಯ” ಎಂದಿಗೂ ಆಗಲಾರದು
ಸತ್ಯಂ ಶರಣಂ ಗಚ್ಛಾಮಿ. ಧರ್ಮಂ ಶರಣಂ ಗಚ್ಛಾಮಿ.
ಸವ್ಯಂ ಶರಣಂ ಗಚ್ಛಾಮಿ. ದಿವ್ಯಂ ಶರಣಂ ಗಚ್ಛಾಮಿ.
ಭವ್ಯಂ ಶರಣಂ ಗಚ್ಛಾಮಿ.
Recent Comments